ಫ಼ೋಕಸ್ ಆನ್ ಪಿಕ್ಚರ್ಸ್ ಲಾಂಛನದಲ್ಲಿ ಎಂ.ಎಸ್.ಯುಸೂಫ಼್ ಅವರು ನಿರ್ಮಿಸಿರುವ ‘ಬುಲೆಟ್ ರಾಣಿ ಚಿತ್ರ ನಾಳೆಯಿಂದ ರಾಜ್ಯಾದ್ಯಂತ ಬಿಡುಗಡೆಯಾಗುತ್ತಿದೆ.
ಸಾಜೀದ್ ಖುರೇಶಿ ನಿರ್ದೇಶನದ ಈ ಚಿತ್ರಕ್ಕೆ ಸೆಲ್ವಂ ಅವರ ಛಾಯಾಗ್ರಹಣವಿದೆ. ಗುಣ್ವಂತ್ ಸಂಗೀತ ನಿರ್ದೇಶನ, ಸುರೇಶ್ಕುಮಾರ್ ಸಂಕಲನ, ವೇಣುಪಾಲ್ ನೃತ್ಯ ನಿರ್ದೇಶನ, ಮಾಸ್ಮಾದ ಸಾಹಸ ನಿರ್ದೇಶನ ಹಾಗೂ ನಾಗು ಕಲಾ ನಿರ್ದೇಶನ ಈ ಚಿತ್ರಕ್ಕಿದೆ. ನಾಗೇಶ್ವರರಾವ್ ಈ ಚಿತ್ರಕ್ಕೆ ಸಂಭಾಷಣೆ ಬರೆದಿದ್ದಾರೆ.
ಪ್ರಿಯಾಂಕ(ನಿಶಾ) ಕೊಠಾರಿ, ಆಶೀಷ್ ವಿದ್ಯಾರ್ಥಿ, ರವಿಕಾಳೆ, ಅಮಿತ್, ಶಫ಼ಿ, ರಮೇಶ್, ಪ್ರತಾಪ್, ರಾಜೇಶ್, ವಿವೇಕ್, ಉದಯ್ ಮುಂತಾದವರು ಈ ಚಿತ್ರದ ತಾರಾಬಳಗದಲ್ಲಿದ್ದಾರೆ.